ಶನಿವಾರ, ಸೆಪ್ಟೆಂಬರ್ 28, 2013

ನದಿಯನ್ನು ಕದಿಯುವವರು...


ನೇತ್ರಾವತಿ ನದಿ ತಿರುಗಿಸುವ ಯೋಜನೆಗೆ ಪೂರ್ವಭಾವಿಯಾಗಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗಿದೆ. ಗೆಳೆಯ ದಿನೇಶ್ ಹೊಳ್ಳ ಕಳೆದೆರಡು ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೆಡೆ ಸಂಚರಿಸಿ ಈ ಯೋಜನೆಯ ಬಗ್ಗೆ ಜನತೆಗೆ ಮಾಹಿತಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಹತ್ತಾರು ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ಕೈಗೊಂಡಿದ್ದಾರೆ. ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯ ಕೊರತೆಯಿದ್ದು, ಸಮರ್ಪಕ ಮಾಹಿತಿ ನೀಡಿದರೆ ಜನರು ಎಚ್ಚೆತ್ತು ಈ ಯೋಜನೆಗೆ ಪ್ರತಿರೋಧ ತೋರಬಹುದು ಎನ್ನುವುದು ಅವರ ಆಶಯ. ಈ ಯೋಜನೆಯನ್ನು ವಿರೋಧಿಸಿ ದಿನೇಶ್ ಹೊಳ್ಳ ಎಲ್ಲೆಲ್ಲಿ ಏನೇನು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ/ ಕೈಗೊಳ್ಳಲಿದ್ದಾರೆ ಎನ್ನುವುದರ ವಿವರ ಅವರ ಫೇಸ್‍ಬುಕ್ ತಾಣದಲ್ಲಿ ಲಭ್ಯವಿದೆ. ’ನದಿಯನ್ನು ಕದಿಯುವವರು’ ಕವನವನ್ನು ಇಲ್ಲಿ ಪ್ರಕಟಿಸಲು ಅನುಮತಿ ನೀಡಿದ ದಿನೇಶ್ ಹೊಳ್ಳರಿಗೆ ಧನ್ಯವಾದಗಳು.

5 ಕಾಮೆಂಟ್‌ಗಳು:

Lakshmipati ಹೇಳಿದರು...

ನಿಜಕ್ಕೂ ನದಿ ತಿರುವು ಯೋಜನೆಯು ವಿಷಾದಕರವಾದದ್ದು. ನಮ್ಮ ಜನಪ್ರತಿನಿದಿಗಳಿಗೆ ಈ ವಿಷಯ ಮನದಟ್ಟು ಮಾಡಿಸುವುದು ಹೇಗೋ........
ಜನಪ್ರತಿನಿದಿಗಳಂತೂ ಜಾಣ ಕಿವುಡರಾಗಿಬಿಟ್ಟಿದ್ದಾರೆ...

ದಿನೇಶ್ ಹೊಳ್ಳ ಹಾಗು ಕರಾವಳಿ ಜನರ ಹೋರಾಟಕ್ಕೆ ನಮ್ಮ ಬೆಂಬಲವಿದೆ.

ಲಕ್ಷ್ಮೀಪತಿ

ರಾಜೇಶ್ ನಾಯ್ಕ ಹೇಳಿದರು...

ಲಕ್ಷ್ಮೀಪತಿ,
ಈ ಯೋಜನೆ ವಿನಾಶಕಾರಿ ಹಾಗೂ ಇದರಿಂದ ಕುಡಿಯಲು ನೀರು ಸಿಗುವುದಿಲ್ಲ ಎನ್ನುವುದು ಜನಪ್ರತಿನಿಧಿಗಳಿಗೆ ತಿಳಿದಿರುವ ವಿಷಯ. ಆದರೆ ಸಿಗುವ ಹಣದ ಮುಂದೆ ಎಲ್ಲಿಯ ಪರಿಸರ?
ನಮ್ಮ ಪ್ರಯತ್ನವಂತೂ ಜಾರಿಯಲ್ಲಿರುತ್ತದೆ. ಜನರೆಲ್ಲರೂ ಒಟ್ಟಾದರೆ, ಯೋಜನೆ ಕೈಬಿಡುವತ್ತ ಸರಕಾರ ಗಮನ ಹರಿಸಬಹುದು.
ಧನ್ಯವಾದ.

Lakshmipati ಹೇಳಿದರು...

ರಾಜೇಶ್,

ಜನರಿಗೆ ನೀರು ಸಿಗುತ್ತದೋ ಇಲ್ಲವೋ, ಆದರೆ ಜನ ಪ್ರತಿನಿಧಿಗಳಿಗೆ ತಿಂದು ತೇಗುವಸ್ಟು ಹಣ ಸಿಗುತ್ತದೆ.
October 3rd ಕನ್ನಡಪ್ರಭ ಆವ್ರುತ್ತಿಯಲ್ಲಿ ಇದರ ಬಗ್ಗೆ ಒಂದು ಲೆಖನ ಬಂದಿದೆ. ಮತ್ತೊಬ್ಬ ನೀರಾವರಿ ತಘ್ನರು ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಅನಾಮಧೇಯ ಹೇಳಿದರು...

Ellarigu namaskara,
Neevu bahushya bayalu seemeyalli vaasisuthidare ee maathu helutiralillaveno.alli neerige tumba abhava ide. borewell galli neeru bathi ogide...eegadare ..neerige Jana enu maadu beku heli.Jana prathinidhi galu duddu maadutharo adu bere visya.janake neeru aste mukya.adu badukalu.Kaveri inda neeru taralu ,Tamil naadu issue gotirode...
Enu maadabeku neeve heli...

Vandanegalu
Jayanth

ರಾಜೇಶ್ ನಾಯ್ಕ ಹೇಳಿದರು...

ಜಯಂತ್,

ಇದು ನೀರಿಗಾಗಿ ಹೋರಾಟವಲ್ಲ. ನದಿಯ ಉಳಿವಿಗಾಗಿ ಹೋರಾಟ. ನಿಮಗೇನು ಅನಿಸುತ್ತೆ? ಈ ಯೋಜನೆಯಿಂದ ಬಯಲುಸೀಮೆಗೆ ನೀರು ಸಿಗುತ್ತದೆ ಎಂದು ತಾನೆ? ಅದು ಅಸಾಧ್ಯವಾದ ಮಾತು. ಈ ಯೋಜನೆಯಿಂದ ನೇತ್ರಾವತಿ ನಾಶವಾಗುವುದಲ್ಲದೆ, ನಂತರ ಅತ್ತ ಬಯಲುಸೀಮೆಗೂ ಇತ್ತ ಕರಾವಳಿಗೂ ನೀರಿರುವುದಿಲ್ಲ. ಸುಮ್ಮನೆ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಭರ್ಜರಿ ಹಣ ಮಾಡಲು ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆಯೆ ವಿನ: ಬಯಲುಸೀಮೆಗೆ ನೀರು ನೀಡಲು ಅಲ್ಲ. ಆದರೆ ಹೇಳುವುದು ಮಾತ್ರ ’ಬಯಲುಸೀಮೆಗೆ ನೀರು’ ಎಂದು. ಬಯಲುಸೀಮೆಯಲ್ಲಿ ನೀರಿನ ಅಭಾವವಿರುವುದರಿಂದ, ಜನರಿಗೆ ಒಂದು ಮರೀಚಿಕೆ ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರಾಜಕಾರಣಿಗಳು ಹೊರಟಿದ್ದಾರೆ. ಅಂತರ್ಜಲ ಹೆಚ್ಚಿಸಲು ಹಲವಾರು ವಿಧಾನಗಳಿವೆ. ಸರಕಾರ ಮನಸ್ಸು ಮಾಡಿದರೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಿ ನೀರಿನ ಅಭಾವವನ್ನು ನಾಲ್ಕಾರು ವರ್ಷಗಳಲ್ಲಿ ತೊಲಗಿಸಬಹುದು, ಅದು ಕೂಡಾ ಬಹಳ ಕಡಿಮೆ ವೆಚ್ಚದಲ್ಲಿ. ಆದರೆ, ಇಲ್ಲಿ ಹಣ ಮಾಡಲು ಅವಕಾಶವಿಲ್ಲದ ಕಾರಣ ಅಂತಹ ಯೋಜನೆಗಳು ಸರಕಾರಕ್ಕೆ ಬೇಡ.